Institute of Translation Studies events and programmes
PROGRAMMES & ACTIVITIES

Events

Lectures, workshops and programmes conducted by the Institute of Translation Studies.

01
WORKSHOP • MAY 2022

Script Writing Workshop

Script Writing Workshop – May 2022

Event information

Detailed programme information for this May 2022 workshop was not included in the supplied documents/images for this update. This section has been created and is ready for the workshop details, poster or photographs to be added.

✦

Workshop Record

Event details will be added here when the May 2022 workshop material is supplied.

Institute of Translation Studies Lecture Series – May 2026 poster
02
LECTURE SERIES • MAY 2026

Lecture Series Translation – May 2026

“ಇಂದಿನ ಕಾಲಘಟ್ಟದಲ್ಲಿ ಅನುವಾದಕರು ಎದುರಿಸುತ್ತಿರುವ ಸವಾಲುಗಳು”

Speaker - 1ಡಾ. ನಾ. ಸೋಮೇಶ್ವರ
Speaker - 2ಎನ್.ಎಸ್. ಶಂಕರ್

Event Report

ಅನುವಾದಕರಿಗೆ ಉದ್ದೇಶಿತ ಓದುಗರು ಯಾರು ಎನ್ನುವ ಸ್ಪಷ್ಟತೆ ಬೇಕು:

ಡಾ.ನಾ.ಸೋಮೇಶ್ವರ* ಬೆಂಗಳೂರು: ಅನುವಾದಕರಿಗೆ ಎರಡೂ ಭಾಷೆಯ ಸಂಸ್ಕೃತಿಯ ಪರಿಚಯ ಇರಬೇಕು, ವಿಷಯ ಜ್ಞಾನ ಇರಬೇಕು. ಬಹಳ ಮುಖ್ಯವಾಗಿ ತಾನು ಯಾರಿಗೆ ಅನುವಾದ ಮಾಡುತ್ತಿದ್ದೇನೆ ಎನ್ನುವ ಸ್ಪಷ್ಟತೆ ಇರಬೇಕು ಎಂದು ಖ್ಯಾತ ವಿಜ್ಞಾನ ಬರಹಗಾರ ʼಥಟ್‌ ಎಂದು ಹೇಳಿʼ ಖ್ಯಾತಿಯ ಡಾ.ನಾ.ಸೋಮೇಶ್ವರ ಹೇಳಿದರು. ಅವರು ಇಂದು 'ಇನ್ಸ್‌ ಟಿಟ್ಯೂಟ್‌ ಆಫ್‌ ಟ್ರಾ ನ್ಸ್ ಲೇಷನ್‌ ಸ್ಟಡೀಸ್‌ʼ̤ ಏರ್ಪಡಿಸಿದ್ದ ಉಪನ್ಯಾಸ ಮಾಲೆಯಲ್ಲಿ ʼಇಂದಿನ ಕಾಲಘಟ್ಟದಲ್ಲಿ ಅನುವಾದಕರು ಎದುರಿಸುತ್ತಿರುವ ಸವಾಲುಗಳುʼ ಎನ್ನುವ ವಿಷಯದ ಕುರಿತು ಮಾತನಾಡುತ್ತಿದ್ದರು. ವಿಜ್ಞಾನ ಅನುವಾದದ ವಿಭಿನ್ನತೆ ಕುರಿತು ಸೋದಾಹರಣವಾಗಿ ಮಾತನಾಡಿದ ಅವರು ವಿಜ್ಞಾನದ ಪಾರಿಭಾಷಿಕ ಪದಗಳನ್ನು ಇಂಗ್ಲೀಷ್‌, ಸಂಸ್ಕೃತ ಹೀಗೆ ಅನ್ಯ ಭಾಷೆಯ ಮೂಲಕ ಅಭಿವ್ಯಕ್ತಿಸಿದಂತೆ ಅಚ್ಚಗನ್ನಡದ ಮೂಲಕ ನೀಡಿದ್ದಿದೆ ಆದರೆ ಓದುಗರಿಗೆ ಅರ್ಥವಾಗುವುದು ಬಹಳ ಮುಖ್ಯವಾದದ್ದು ಹೀಗಾಗಿ ಅನುವಾದದ ಉದ್ದೇಶ ಮತ್ತು ಸಂದರ್ಭಗಳನ್ನು ಗಮನಿಸ ಬೇಕು ಎಂದು ಹೇಳಿದರು. ಇದೇ ಮಾಲಿಕೆಯಲ್ಲಿ ಉಪನ್ಯಾಸ ನೀಡಿದ ಖ್ಯಾತ ಚಿತ್ರ ನಿರ್ದೇಶಕ ಮತ್ತು ಪತ್ರಕರ್ತ ಎನ್.ಎಸ್.ಶಂಕರ್‌ ಅನುವಾದದಲ್ಲಿ ಮೂಲಸ್ವರೂಪವನ್ನು ಉಳಿಸಿ ಕೊಳ್ಳುವುದು ಮುಖ್ಯ, ಭಾಷೆಯ ಜಾಯಮಾನಕ್ಕೆ ತಕ್ಕಂತೆ ಅನುವಾದಿಸ ಬೇಕು, ಸಾಹಿತ್ಯೇತರ ಅನುವಾದಗಳಲ್ಲಿ ಸ್ಪಷ್ಟತೆ ಇಲ್ಲ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯ ಬೇಕಾದ ಅಗತ್ಯವಿದೆ ಎಂದರು. ಸಿನಿಮಾ ಕ್ಷೇತ್ರದಲ್ಲಿ ಅನುವಾದಕ್ಕೆ ವಿಪುಲ ಅವಕಾಶಗಳಿದ್ದು ಈ ಕುರಿತು ಚರ್ಚೆಗಳು ನಡೆಯ ಬೇಕು ಎಂದು ಹೇಳಿದರು. ಉಪನ್ಯಾಸ ಮಾಲಿಕೆಯ ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಸಂಸ್ಥೆಯ ಅಧ್ಯಕ್ಷ ಬಿ.ಆರ್.ರವೀಂದ್ರನಾಥ್‌ 'ಇನ್ಸ್‌ ಟಿಟ್ಯೂಟ್‌ ಆಫ್‌ ಟ್ರಾ ನ್ಸ್ ಲೇಷನ್‌ ಸ್ಟಡೀಸ್‌ʼ̤ 2002ರಲ್ಲಿ ಸ್ಥಾಪಿತವಾಯಿತು. ನಾವು ಹಲವಾರು ಅನುವಾದಕರ ಸಭೆಗಳನ್ನು ಸಂಘಟಿಸಿ ಚಿಂತನ ಮಂಥನ ನಡೆಸಿದ್ದೇವೆ, ಅನುವಾದ ಸ್ಪರ್ಧೆಗಳನ್ನು ನಡೆಸಿದ್ದೇವೆ, ನಮ್ಮ ಅನುವಾದದ ಕೋರ್ಸ್‌ಗಳ ಲಾಭವನ್ನು ದೇಶಾದ್ಯಂತ ಸಾವಿರಾರು ಜನರು ಪಡೆದು ಕೊಂಡಿದ್ದಾರೆ, ಕರ್ನಾಟಕ ಸರ್ಕಾರವೂ ನಮ್ಮ ಕೋರ್ಸ್‌ಗಳಿಗೆ ಮಾನ್ಯತೆ ನೀಡಿದೆ. ಯಾಂತ್ರಿಕ ಅನುವಾದ ಮತ್ತು ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲಿ ಅನುವಾದಕರ ಮಹತ್ವ ಮತ್ತು ಅನಿವಾರ್ಯತೆ ಕುರಿತು ಹೊಸ ಸ್ವರೂಪದಲ್ಲಿ ಸಂಸ್ಥೆಯನ್ನು ಮುನ್ನೆಡಿಸುತ್ತಿದ್ದು ಈ ಉಪನ್ಯಾಸ ಮಾಲಿಕೆಗಳು ಅದರ ಭಾಗ ಎಂದರು. ಕಾರ್ಯಕ್ರಮವನ್ನು ನಿರೂಪಿಸಿದ ಸಂಸ್ಥೆಯ ಕಾರ್ಯದರ್ಶಿ ಎನ್.ಎಸ್.ಶ್ರೀಧರ ಮೂರ್ತಿ ಅನುವಾದ, ಪಂಚಾಂಗ ಗಣಿತ, ಸಬ್‌ ಟೈಟಲ್‌ಗಳ ಕುರಿತು ಸಂಸ್ಥೆಯು ಶೀಘ್ರವಾಗಿ ಹೊಸ ಕೋರ್ಸ್‌ಗಳನ್ನು ಆರಂಭಿಸಲಿದ್ದು, ಸಂಸ್ಥೆಯು ಇನ್ನೂ ಅನೇಕ ಯೋಜನೆಗಳನ್ನು ಹೊಂದಿದ್ದು ಅದನ್ನು ಹಂತ ಹಂತವಾಗಿ ಹಂಚಿ ಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಎನ್.ಗೋಪಾಲಕೃಷ್ಣ ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು. ಖ್ಯಾತ ಅನುವಾದಕರೂ ಸೇರಿದಂತೆ ಅನೇಕ ಆಸಕ್ತರು ಸಭೆಯಲ್ಲಿ ಭಾಗವಹಿಸಿದ್ದರು. ‌ ಜಿ.ಸಿ.ಸೋಮದಾಸ್‌ ಖಚಾಂಜಿಗಳು, 'ಇನ್ಸ್‌ ಟಿಟ್ಯೂಟ್‌ ಆಫ್‌ ಟ್ರಾ ನ್ಸ್ ಲೇಷನ್‌ ಸ್ಟಡೀಸ್‌ʼ̤

03
LECTURE SERIES • AUGUST 22ND 2026

Lecture Series Translation – August 22nd 2026

ಉಪನ್ಯಾಸ ಮಾಲೆ – 2

Programme poster

The supplied programme poster has been incorporated below without changing its original information.

Institute of Translation Studies Lecture Series – August 22nd 2026 poster